Feedback

ಮುಳಿಯ ಸೆಲ್ಫಿ ಸ್ಪರ್ಧೆ ಬಹುಮಾನ-ವಿತರಣೆ

ಪ್ರತಿಷ್ಠಿತ ಮುಳಿಯ ಜುವೇಲ್ಸ್ ಬೆಳ್ತಂಗಡಿಯಲ್ಲಿ ಸೆಲ್ಫಿ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಮಾರ್ಚ್ 05 ರಂದು ಮುಳಿಯ ಶೋರೂಂ ನಲ್ಲಿ ಜರುಗಿತು. ಪ್ರಥಮ ಬಹುಮಾನವನ್ನು ಪ್ರಮೋದ್ ಈಶ, ದ್ವಿತೀಯ ಬಹುಮಾನವನ್ನು ರಾಧಾಲಕ್ಷ್ಮೀ ಭಟ್ ಹಾಗೂ ತೃತೀಯ ಬಹುಮಾನವನ್ನು ಅಕ್ಷತಾ ಶೆಟ್ಟಿ ಇವರು ಪಡೆದುಕೊಂಡಿರುತ್ತಾರೆ. ಈ ಸೆಲ್ಫಿ ಸ್ಪರ್ಧೆಯನ್ನು ಮುಳಿಯದ ಚಿನ್ನವನ್ನು ತೊಟ್ಟುಕೊಂಡು ಮುಳಿಯದ ಫೇಸ್ಬುಕ್ ಪೇಜ್ ನಲ್ಲಿ ಅಪ್ಲೋಡ್ ಮಾಡಿ ಲೈಕ್ಸ್ ಗಳಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಇದೇ ತರಹದ ಸ್ಪರ್ಧೆಯನ್ನು ಮುಳಿಯ ನಡೆಸಲಿದೆ. ಬೆಳ್ತಂಗಡಿಯ ಯುವಕ, ಯುವತಿಯರು ಮುಳಿಯದ ಫೇಸ್ಬುಕ್ ಪೇಜ್ ನ್ನು ಲೈಕ್ ಮಾಡಿ ಡಿಜಿಟಲ್ ಮುಳಿಯ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಬೆಳ್ತಂಗಡಿ ಶಾಖಾ ಪ್ರಬಂಧಕ ಪ್ರವೀಣ್ ಬಿ ತಿಳಿಸಿದರು. ಈ ಸಂದರ್ಭದಲ್ಲಿ ಸಹಾಯಕ ಶಾಖಾ ಪ್ರಬಂಧಕ ಭವಿತ್ ಯು, ಸೀನಿಯರ್ ಸೇಲ್ಸ್‌ ಎಕ್ಸಿಕ್ಯೂಟಿವ್ ರಮೇಶ್ ಗೌಡ, ಹಾಗೂ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಜಗದೀಶ್ ಉಪಸ್ಥಿತರಿದ್ದರು.