Feedback

ಪುತ್ತೂರಿನಲ್ಲಿ ಸೆಲ್ಫಿ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ

ಪ್ರತಿಷ್ಟಿತ ಮುಳಿಯ ಜ್ಯುವೆಲ್ಸ್ ಪುತ್ತೂರಿನಲ್ಲಿ ಸೆಲ್ಫಿ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಮಾ.7ರಂದು ಮುಳಿಯ ಶೋ ರೂಂನಲ್ಲಿ ಜರುಗಿತು. ಪ್ರಥಮ ಭವ್ಯ ಆಚಾರ್ಯ, ದ್ವಿತೀಯ ಪೂಜಾ ಪ್ರಶಾಂತ್, ತೃತೀಯ ರಾಧಿಕಾ, ಚತುರ್ಥ ಕೃತಿಕಾ ಐತಾಳ್ ಹಾಗೂ ಪಂಚಮ ಅನು ಜಗದೀಶ ರವರಿಗೆ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಮುಳಿಯರವರು ಬಹುಮಾನವನ್ನು ವಿತರಿಸಿದರು. ಈ ಸೆಲ್ಫಿ ಸ್ಪರ್ಧೆಯನ್ನು ಮುಳಿಯದ ಚಿನ್ನವನ್ನು ತೊಟ್ಟುಕೊಂಡು ಮುಳಿಯದ ಫೇಸ್ಬುಕ್ ಪೇಜ್‍ನಲ್ಲಿ ಅಪ್‍ಲೋಡ್ ಮಾಡಿ ಲೈಕ್ಸ್‍ಗಳಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಇದೇ ತರಹದ ಸ್ಪರ್ಧೆಯನ್ನು ಮುಳಿಯ ನಡೆಸಲಿದೆ. ಪುತ್ತೂರಿನ ಯುವಕ ಯುವತಿಯರು ಮುಳಿಯದ ಫೇಸ್ಬುಕ್ ಪೇಜನ್ನು ಲೈಕ್ ಮಾಡಿ ಡಿಜಿಟಲ್ ಮುಳಿಯ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಪುತ್ತೂರಿನ ಶಾಖಾ ಪ್ರಬಂದಕ ನಾಮ್‍ದೇವ್ ಮಲ್ಯರವರು ತಿಳಿಸಿದರು. ಈ ಸಂದರ್ಭದಲ್ಲಿ ಸಹಾಯಕ ಫ್ಲೋರ್ ಮ್ಯಾನೇಜರ್ ಯತೀಶ್ ಆಚಾರ್ಯ, ಆನಂದ ಕುಲಾಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.